ಪಂಜಾಬ್‌ನಲ್ಲಿ ೨೦೧೯-೨೦ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಮೊದಲ ಪ್ರಕರಣವು ಮಾರ್ಚ್ ೯, ೨೦೨೦ ರಂದು ವರದಿಯಾಗಿದೆ. ೧೧ ಏಪ್ರಿಲ್ ೨೦೨೦ರ ವರದಿಯಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪಂಜಾಬ್‌ನಲ್ಲಿ ೧೨ ಸಾವುಗಳು ಮತ್ತು ೧೮ ಚೇತರಿಕೆ ಸೇರಿದಂತೆ ಒಟ್ಟು ೧೫೧ ಪ್ರಕರಣಗಳನ್ನು ದೃಢಪಡಿಸಿದೆ. == ಅಂಕಿಅಂಶಗಳು == == ಟೈಮ್ ಲೈನ್ == ಮಾರ್ಚ್ ಮಾರ್ಚ್ ೯ ರಂದು, ಇಟಲಿಯಿಂದ ಪಂಜಾಬಿನ ಅಮೃತಸರಗೆ ಹಿಂದಿರುಗಿದ ವ್ಯಕ್ತಿಯಲ್ಲಿ ಮೊದಲ ಪ್ರಕರಣ ಪತ್ತೆಯಾಯಿತು. ಮಾರ್ಚ್ ೧೯ ರಂದು, ಜರ್ಮನಿಯಿಂದ ಇಟಲಿಯ ಮೂಲಕ ಮರಳಿದ ೭೨ ವರ್ಷದ ಪಂಜಾಬಿನ ವ್ಯಕ್ತಿಯೊಬ್ಬರು ದೇಶದಲ್ಲಿ ನಾಲ್ಕನೇ ಕೊರೋನಾವೈರಸ್ ಸೋಂಕಿತ ವ್ಯಕ್ತಿ ಮತ್ತು ಪಂಜಾಬಿನಲ್ಲಿ ಕೊರೋನಾವೈರಸ್ ಕಾಯಿಲೆಯಿಂದಾಗಿ ಬಲಿಯಾದ ಮೊದಲ ವ್ಯಕ್ತಿ. ಮಾರ್ಚ್ ೨೦ ರಂದು, ಮೂರನೇ ಪ್ರಕರಣ ಪಂಜಾಬ್‌ನ ಎಸ್.ಎ.ಎಸ್. ನಗರದಲ್ಲಿ, ಯುನೈಟೆಡ್ ಕಿಂಗ್‌ಡಂನಿಂದ ಹಿಂದಿರುಗಿದ ೬೮ ವರ್ಷದ ಮಹಿಳೆಯಲ್ಲಿ ವೈರಸ್ ಇರುವುದು ಪತ್ತೆಯಾಯಿತು. ಮಾರ್ಚ್ ೨೧ ರಂದು, ಹನ್ನೊಂದು ಕೊರೋನವೈರಸ್ ಪ್ರಕರಣಗಳು ದೃಢಪಟ್ಟವು. ನವಾನ್‌ಶಹರ್‌ನಲ್ಲಿ ೬, ಮೊಹಾಲಿಯಲ್ಲಿ ೩, ಮತ್ತು ಹೋಶಿಯಾರ್‌ಪುರದಲ್ಲಿ ೨ ಪ್ರಕರಣಗಳು ದಾಖಾಲಾಗಿವೆ. ನವಾನ್‌ಶಹರ್‌ನಲ್ಲಿ ೬ ಮಂದಿ ಮತ್ತು ಹೋಶಿಯಾರ್‌ಪುರದ ಒಬ್ಬರು, ಕೊರೋನವೈರಸ್‌ನಿಂದಾಗಿ ಮಾರ್ಚ್ ೧೯ ರಂದು ನವಾನ್‌ಶಹರ್‌ನಲ್ಲಿ ನಿಧನರಾದ ೭೨ ವರ್ಷದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಇದ್ದವರು. ಮಾರ್ಚ್ ೨೨ ರಂದು, ನವಾನ್‌ಶಹರ್‌ನಲ್ಲಿ ಇನ್ನೂ ೭ ಕೊರೊನಾವೈರಸ್ ಪ್ರಕರಣಗಳು ದೃಢಪಟ್ಟಿತು. ಈ ಎಲ್ಲಾ ವ್ಯಕ್ತಿಗಳು ಮಾರ್ಚ್ ೧೯ ರಂದು ನಿಧನರಾದ ಅದೇ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಇದ್ದವರು. ಮಾರ್ಚ್ ೨೩ ರಂದು, ರಾಜ್ಯದಲ್ಲಿ ಇನ್ನೂ ಎರಡು ಪ್ರಕರಣಗಳು ದೃಢಪಟ್ಟಿತು, ನವಾನ್‌ಶಹರ್‌ನಲ್ಲಿ ಒಂದು ಮತ್ತು ಮೊಹಾಲಿಯಲ್ಲಿ ಒಂದು. ಮಾರ್ಚ್ ೨೪ ರಂದು, ೩ ಪ್ರಕರಣಗಳು ರಾಜ್ಯದಲ್ಲಿ ದೃಢಕರಿಸಲ್ಪಟ್ಟವು ಮತ್ತು ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರು. ಇವರು ಕೂಡ ಮಾರ್ಚ್ ೧೯ ರಂದು ಮೊಹಾಲಿಯಲ್ಲಿ ನಿಧನರಾದ ಅದೇ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಇದ್ದವರು. ಇದರ ನಂತರ ನವಾನ್‌ಶಹರ್‌ನಲ್ಲಿ ಇನ್ನೂ ೩ ಪ್ರಕರಣಗಳು ದೃಢಪಟ್ಟಿದೆ. ಮಾರ್ಚ್ ೨೫ ರಂದು, ಪಂಜಾಬ್‌ನಲ್ಲಿ ಇನ್ನೂ ಎರಡು ಪ್ರಕರಣಗಳು ದೃಢಪಟ್ಟಿದೆ. ಲುಧಿಯಾನ ಜಿಲ್ಲೆಯ ೫೪ ವರ್ಷದ ಮಹಿಳೆ ಧನಾತ್ಮಕ ಫಲಿತಾಂಶ ನೀಡಿದರು ಮತ್ತು ಹೋಶಿಯಾರ್‌ಪುರದಲ್ಲಿ ೧ ಪ್ರಕರಣ ದೃಢಪಟ್ಟಿದೆ. ಮಾರ್ಚ್ ೨೬ ರಂದು, ಅಮೃತಸರದ ಏಕೈಕ ಕೊರೋನಾ ಪಾಸಿಟಿವ್ ರೋಗಿಯು ಸೋಂಕಿನಿಂದ ಚೇತರಿಸಿಕೊಂಡರು. ಜಲಂಧರ್ ನಲ್ಲಿ ೭೦ ವರ್ಷದ ಮಹಿಳೆಯಲ್ಲಿ ಸೋಂಕು ಇರುವುದು ಪತ್ತೆಯಾಯಿತು ಹಾಗೂ ನವಾನ್‌ಶಹರ್‌ನಲ್ಲಿ ೧ ಹೊಸ ಪ್ರಕರಣ ದಾಖಾಲಾಗಿವೆ. ಮಾರ್ಚ್ ೨೭ ರಂದು, ಹೋಶಿಯಾರ್ಪುರದಲ್ಲಿ ೩ ಪ್ರಕರಣಗಳು ಮತ್ತು ಜಲಂಧರ್ನಲ್ಲಿ ೧ ಪ್ರಕರಣ ದೃಢಪಟ್ಟಿದೆ. ಮೊಹಾಲಿಯಲ್ಲಿ ೩೮ ವರ್ಷದ ಮಹಿಳೆ ಧನಾತ್ಮಕ ಫಲಿತಾಂಶವನ್ನು ನೀಡಿದ್ದಾರೆ. ಮಾರ್ಚ್ ೨೯ ರಂದು, ಕೊರೋನವೈರಸ್‌ನಿಂದಾಗಿ ಪಂಜಾಬ್ನಲ್ಲಿ ೬೨ ವರ್ಷದ ವ್ಯಕ್ತಿ ನಿಧನ ಹೊಂದಿದರು. ಇದು ಪಂಜಾಬಿನ ಎರಡನೇ ಸಾವು ಎಂದು ದಾಖಾಲಾಗಿದೆ. ಮೂಲತಃ ಹೋಶಿಯಾರ್‌ಪುರದರಾದ ಇವರು ಅಮೃತಸರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇವರು ಮಾರ್ಚ್ ೧೯ ರಂದು ನಿಧನರಾದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿ ಇದ್ದವರು. ಪಟಿಯಾಲ ಜಿಲ್ಲೆಯ ನೇಪಾಳದಿಂದ ಹಿಂದಿರುಗಿದ ೨೧ ವರ್ಷದ ಬಾಲಕ ಹರಿಯಾಣದ ಅಂಬಾಲಾದಲ್ಲಿ ಕರೋನಾ ಪಾಸಿಟಿವ್ ಫಲಿತಾಂಶವನ್ನು ನೀಡಿದ್ದಾರೆ. ಮಾರ್ಚ್ ೩೦ ರಂದು, ೬೫ ವರ್ಷದ ವ್ಯಕ್ತಿಯೊಬ್ಬರು ಮೊಹಾಲಿಯಲ್ಲಿ ಧನಾತ್ಮಕ ಪರೀಕ್ಷೆ ನಡೆಸಿದರು. ಲುಧಿಯಾನದ ೪೨ ವರ್ಷದ ಮಹಿಳೆ ಪಟಿಯಾಲದ ಆಸ್ಪತ್ರೆಯಲ್ಲಿ ಧನಾತ್ಮಕ ಪರೀಕ್ಷೆ ನಡೆಸಿದರು ಮತ್ತು ಅದೇ ದಿನ ಸಾವನ್ನಪ್ಪಿದರು.ದುಬೈನಿಂದ ಹಿಂದಿರುಗಿದ ೩೫ ವರ್ಷದ ವ್ಯಕ್ತಿಯಲ್ಲಿ ಸೋಂಕು ಇರುವುದು ಪತ್ತೆಯಾಯಿತು. ಮಾರ್ಚ್ ೩೧ ರಂದು, ಕೊರೋನಾವೈರಸ್‌ನಿಂದಾಗಿ ಮೊಹಾಲಿಯ ಈ ಹಿಂದೆ ಸೋಂಕಿಗೆ ಒಳಗಾಗಿದ್ದ ೬೫ ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು. ಏಪ್ರಿಲ್ ಏಪ್ರಿಲ್ ೧ ರಂದು, ಲುಧಿಯಾನದಲ್ಲಿ ೭೨ ವರ್ಷದ ಮಹಿಳೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ. ಮಾರ್ಚ್ ೩೦ ರಂದು ನಿಧನರಾದ ೪೨ ವರ್ಷದ ಮಹಿಳೆಯೊಂದಿಗೆ ಅವರು ಸಂಪರ್ಕಕ್ಕೆ ಬಂದವರು. ಮೊಹಾಲಿಯಲ್ಲಿ ಇನ್ನೂ ಮೂರು ಪ್ರಕರಣಗಳನ್ನು ದೃಢಪಡಿಸಲಾಯಿತು. ೬೮ ವರ್ಷದ ನಿರ್ಮಲ್ ಸಿಂಗ್ ಖಾಲ್ಸಾ ಅಮೃತಸರದಲ್ಲಿ ಧನಾತ್ಮಕ ಫಲಿತಾಂಶ ನೀಡಿದರು. ಏಪ್ರಿಲ್ ೨ ರಂದು, ಕೋವಿಡ್-೧೯ ನಿಂದ ಉಂಟಾದ ತೊಡಕುಗಳಿಂದ ನಿರ್ಮಲ್ ಸಿಂಗ್ ಖಾಲ್ಸಾ ಸಾವನ್ನಪ್ಪಿದರು. ಇದು ಪಂಜಾಬಿನ ಐದನೇ ಸಾವು. ಹೋಶಿಯಾರ್ಪುರ್ ಮತ್ತು ಲುಧಿಯಾನ ಜಿಲ್ಲೆಯಲ್ಲಿ ಎರಡು ಹೊಸ ಪ್ರಕರಣಗಳು ದೃಢಪಟ್ಟಿದೆ. ಏಪ್ರಿಲ್ ೩ ರಂದು, ಪಂಜಾಬ್‌ನಲ್ಲಿ ಇನ್ನೂ ಐದು ಪ್ರಕರಣಗಳು ದೃಢಪಟ್ಟಿದ್ದು, ಅದರಲ್ಲಿ ಮೂವರು ಅಮೃತಸರದವರು ಮತ್ತು ಇವರು ನಿರ್ಮಲ್ ಸಿಂಗ್ ಖಲ್ಸಾ ಅವರೊಂದಿಗೆ ಸಂಪರ್ಕಕ್ಕೆ ಬಂದವರು. ಮಾರ್ಚ್‌ ೨ರಂದು ದೆಹಲಿಯ ನಿಜಾಮುದ್ದೀನ್‌ನಲ್ಲಿ ಸಭೆಗೆ ಹಾಜರಾದ ಮೊಹಾಲಿಯ ಇಬ್ಬರು ಧನಾತ್ಮಕ ಫಲಿತಾಂಶವನ್ನು ನೀಡಿದ್ದಾರೆ. ನಂತರ ಇನ್ನೂ ೪ ಪ್ರಕರಣಗಳು ದೃಢಪಟ್ಟವು, ೩ ಮಾನ್ಸಾ ಜಿಲ್ಲೆಯ ಬುಧ್ಲಾದಿಂದ ನಿಜಾಮುದ್ದೀನ್‌ನಲ್ಲಿ ಸಭೆಗೆ ಹಾಜರಾದವರು ಮತ್ತು ೧ ರುಪ್‌ನಗರದ ವ್ಯಕ್ತಿ. ಏಪ್ರಿಲ್ ೪ ರಂದು, ಫರೀದ್ಕೋಟ್ ಜಿಲ್ಲೆಯಲ್ಲಿ ಕೊರೋನಾವೈರಸ್ನ ಮೊದಲ ಪ್ರಕರಣ ವರದಿಯಾಗಿದೆ, ೩೫ ವರ್ಷದ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಇರುವುದು ಪತ್ತೆಯಾಗಿದೆ. ನಿರ್ಮಲ್ ಸಿಂಗ್ ಖಲ್ಸಾ ರವರ ೩೫ ವರ್ಷದ ಮಗಳು ತನ್ನ ತಂದೆಯ ಮರಣದ ಎರಡು ದಿನಗಳ ನಂತರ ಜಲಂಧರ್‌ನಲ್ಲಿ ಧನಾತ್ಮಕ ಫಲಿತಾಂಶವನ್ನು ನೀಡಿದ್ದಾರೆ. ಇನ್ನೂ ೬ ಪ್ರಕರಣಗಳು ದೃಢಪಟ್ಟಿದೆ. ಏಪ್ರಿಲ್ ೫ ರಂದು, ಮೊಹಾಲಿಯ ಡೇರಾ ಬಾಸ್ಸಿಯಲ್ಲಿ ೪೨ ವರ್ಷದ ವ್ಯಕ್ತಿಯಲ್ಲಿ ಕೊರೋನಾವೈರಸ್ ಇರುವುದು ಪತ್ತೆಯಾಗಿದೆ ಮತ್ತು ಲುಧಿಯಾನದಲ್ಲಿ ೨೮ ವರ್ಷದ ವ್ಯಕ್ತಿ ಧನಾತ್ಮಕ ಫಲಿತಾಂಶವನ್ನು ನೀಡಿದ್ದಾರೆ.ಬರ್ನಾಲಾ ಜಿಲ್ಲೆಯಲ್ಲಿ ೪೨ ವರ್ಷದ ಮಹಿಳೆಗೆ ಕೊರೋನಾ ಇರುವುದು ಪತ್ತೆಯಾಯಿತು.ಏಪ್ರಿಲ್ ೧ ರಂದು ಕೊರೋನಾ ಪಾಸಿಟಿವ್ ಪರೀಕ್ಷಿಸಿದ ೭೨ ವರ್ಷದ ಮಹಿಳೆ ಲುಧಿಯಾನದಲ್ಲಿ ಸಾವನ್ನಪ್ಪಿದರು ಮತ್ತು ಪಠಾಣ್‌ಕೋಟಿನ ಮಹಿಳೆ ಅಮೃತಸರದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಏಪ್ರಿಲ್ ೬ ರಂದು, ಪಂಜಾಬ್‌ನ ೫ ಜಿಲ್ಲೆಗಳಿಂದ ೭ ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿವೆ. == ಪ್ರತಿಕ್ರಿಯೆ == ಮಾರ್ಚ್ ೧೩ ರಂದು, ಪಂಜಾಬ್ ಸರ್ಕಾರ ಮಾರ್ಚ್ ೩೧ ರವರೆಗೆ ಎಲ್ಲಾ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದೆ. ಮಾರ್ಚ್ ೧೬ ರಂದು, ಪಂಜಾಬ್ ಸರ್ಕಾರ ಜಿಮ್, ರೆಸ್ಟೋರೆಂಟ್‌ಗಳನ್ನು ಮುಚ್ಚಲು ಸಲಹೆಯನ್ನು ನೀಡಿದೆ. ಮಾರ್ಚ್ ೧೯ ರಂದು, ಪಂಜಾಬ್ ಶಾಲಾ ಶಿಕ್ಷಣ ಮಂಡಳಿ ೧೦ ಮತ್ತು ೧೨ನೇ ತರಗತಿಗಳ ಎಲ್ಲಾ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿದೆ. ಮಾರ್ಚ್ ೨೦ರ ಮಧ್ಯರಾತ್ರಿಯಿಂದ ಪಂಜಾಬ್ ಸರ್ಕಾರವು ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಿದೆ ಮತ್ತು ೨೦ರಿಂದ ಹೆಚ್ಚು ಜನರು ಗುಂಪುಗೂಡುವದನ್ನು ನಿಷೇಧಿಸಿದೆ. ಮಾರ್ಚ್ ೨೨ ರಂದು, ಪಂಜಾಬ್ ಸರ್ಕಾರವು ತುರ್ತು ಸೇವೆಗಳನ್ನು ಹೊರತುಪಡಿಸಿ ಮಾರ್ಚ್ ೩೧ ರವರೆಗೆ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿತು. ಮಾರ್ಚ್ ೨೩ ರಂದು, ಪಂಜಾಬ್ ಸರ್ಕಾರವು ರಾಜ್ಯಾದ್ಯಂತ ಸಂಪೂರ್ಣ ಕರ್ಫ್ಯೂ ವಿಧಿಸಿತು. ಪಂಜಾಬ್ ಕರ್ಫ್ಯೂ ವಿಧಿಸಿದ ಮೊದಲ ರಾಜ್ಯವಾಗಿದೆ. ಪಂಜಾಬ್ ಸರ್ಕಾರ ಸಿಎಂ ರಿಲೀಫ್ ಫಂಡ್‌ನಿಂದ ಬಡವರಿಗೆ ಉಚಿತ ಆಹಾರ ಮತ್ತು ಔಷಧಿಗಾಗಿ ೨೦ ಕೋಟಿ ರೂಪಾಯಿ ಮಂಜೂರು ಮಾಡಿದೆ. ಮಾರ್ಚ್ ೨೪ ರಂದು, ಕೊರೋನಾವೈರಸ್‌ ಸೋಂಕಿನಿಂದ ಸಂಕಷ್ಟದಲ್ಲಿರುವ ಜನರ ಕಲ್ಯಾಣಕ್ಕಾಗಿ, ಪಂಜಾಬ್ ಮುಖ್ಯಮಂತ್ರಿ 'ಕೋವಿಡ್ ಪರಿಹಾರ ನಿಧಿ'ಯನ್ನು ಸ್ಥಾಪಿಸಿದರು. == ಉಲ್ಲೇಖಗಳು ==